ಧಾರವಾಡ: ಇಲ್ಲಿನ ವಕೀಲರ ಸಂಘಕ್ಕೆ ಶನಿವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಹಿರಿಯ ನ್ಯಾಯವಾದಿ ಸಿ.ಎಸ್.ನೇಗಿನಹಾಳ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ತ್ರಿಕೋನ ಸ್ಪರ್ಧೆಯಲ್ಲಿ ಅಶೋಕ ದೊಡ್ಡಮನಿ ಮತ್ತು ಬಿ.ಎಸ್. ಘೋಡಸೆ ಅವರು ಪರಾಭವಗೊಂಡರು.
ಉಪಾಧ್ಯಕ್ಷರಾಗಿ ಸಂಗಮೇಶ ಬನ್ನೂರ, ಸಚಿನ್ ಕುಲಕರ್ಣಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಖಜಾಂಚಿಯಾಗಿ ಸುವರ್ಣ ಅಂಟಿನ ಮತ್ತು ಜಂಟಿ ಕಾರ್ಯದರ್ಶಿಯಾಗಿ ಸಂಜೀವ ಪೂಜಾರ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ ಸುಂಕದ, ಗಂಗಾಧರ ಜಾವೂರ, ಶಕ್ತಿ ಹಿರೇಮಠ, ಉಳವಪ್ಪ ಉಳವಣ್ಣವರ, ಮಂಜುನಾಥ ಮಡಿವಾಳರ, ಚೈತ್ರಾ ದಂಡಿನ ಮತ್ತು ಮಹಿಳಾ ಪ್ರತಿನಿಧಿಯಾಗಿ ಶ್ರೀದೇವಿ ಕೊಲ್ಹಾರ
ವಿಜಯ ಮಾಲೆ ಧರಿಸುವ ಮೂಲಕ ಗೆಲುವಿನ ನಗೆ ಬೀರಿದರು.
ಸತೀಶ ರಾಯಚೂರ ಚುನಾವಣಾಧಿಕಾರಿಯಾಗಿ ಮತ್ತು ಬಸವರಾಜ ಹಟ್ಟಿ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ತಡ ರಾತ್ರಿ ವರೆಗೆ ಮತ ಎಣಿಕೆ ನಡೆಯಿತು. ಫಲಿತಾಂಶದ ಬಳಿಕ ವಿಜೇತರ ಅಭಿಮಾನಿಗಳು ಬಣ್ಣ ಎರಚಿ,ಸಿಹಿ ವಿತರಿಸುವ ಮೂಲಕ ಸಂಭ್ರಮ ಆಚರಿಸಿದರು.
*ನೂರಕ್ಕೂ ಅಧಿಕ ಮತಗಳು ತಿರಸ್ಕೃತ*
ವಕೀಲರ ಸಂಘದ ಚುನಾವಣೆಯಲ್ಲಿ ನೂರಕ್ಕೂ ಅಧಿಕ ಮತಗಳು ತಿರಸ್ಕೃತ ಆಗಿದ್ದು ವಿಶೇಷ. ಚಲಾವವಣೆಯಾದ ಒಟ್ಟು ಮತಗಳಲ್ಲಿ 130 ಮತಗಳು ಅಸಿಂಧುಗೊಂಡಿವೆ.
ಸಂಘವು ಅಕ್ಷರಸ್ಥ ಸದಸ್ಯರನ್ನೇ ಹೊಂದಿದ್ದರೂ ನಿಯಮಬದ್ಧವಾಗಿ ಮತ ಚಲಾಯಿಸುವಲ್ಲಿ ಕೆಲವರು ವಿಫಲರಾಗಿದ್ದಾರೆ. ತಿರಸ್ಜೃತ ಮತಗಳು ಅಕಸ್ಮಾತ್ ಕ್ರಮಬದ್ಧ ಆಗಿದ್ದರೆ, ಕೆಲವು ಅಭ್ಯರ್ಥಿಗಳ ಸೋಲು-ಗೆಲುವಿನಲ್ಲಿ ಪ್ರಮುಖ ಆಗುತ್ತಿದ್ದವು ಎಂದು ವಕೀಲರ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.



