ಹೊಸದಿಲ್ಲಿ: ಭಾರತ ಹಾಗೂ ಪಾಕ ಮಧ್ಯೆ ಯುದ್ಧ ಭೀತಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂಡಿಯನ್ ಪ್ರೀಮಿಯರ್ ಲೀಗ್ 2025 ಅನ್ನು ಒಂದು ಒಂದು ವಾರ ಸ್ಥಗಿತಗೊಳಿಸಿದೆ.
ಬಿಸಿಸಿಐ ಇಂದು (ಮೇ 9) ಮಹತ್ವದ ಸಭೆ ನಡೆಸಿ 2025ನೇ ಸಾಲಿನ 18ನೇ ಆವೃತ್ತಿಯ ಐಪಿಎಲ್ ಇನ್ನುಳಿದ ಪಂದ್ಯಗಳನ್ನು ಬಿಸಿಸಿಐ ಅಮಾನತು ಮಾಡಿದೆ.
ನಿನ್ನೆ ಪಂಜಾಬ್ನ ಧರ್ಮಶಾಲಾದಲ್ಲಿ ಈ ವರ್ಷದ 58ನೇ ಪಂದ್ಯ ನಡೆಯುತ್ತಿತ್ತು. 10.1 ಓವರ್ಗೆ ಫ್ಲಡ್ಲೈಟ್ ಸಮಸ್ಯೆ ಆಯಿತು. ಆ ಬಳಿಕ ಭದ್ರತಾ ಕಾರಣದಿಂದ ಮ್ಯಾಚ್ನ ರದ್ದು ಮಾಡಲಾಯಿತು.
ಈ ಬಾರಿ ಸಧ್ಯ ಗುಜರಾತ್ ತಂಡ ಮೊದಲ ಸ್ಥಾನದಲ್ಲಿದ್ದು, ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿ ಇತ್ತು.
ಸಿಎಂ ಪರೀಕ್ಷೆ ಮುಂದೂಡಿಕೆ :
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಮೇ 9 ರಿಂದ 14 ರವರೆಗೆ ನಡೆಯಬೇಕಿದ್ದ ಸಿಎ ಇಂಟರ್ಮೀಡಿಯೇಟ್, ಫೈನಲ್ ಮತ್ತು ಪೋಸ್ಟ್-ಅರ್ಹತಾ ಪತ್ರಿಕೆಗಳನ್ನು ಮುಂದೂಡಿದ್ದು ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಸಂಸ್ಥೆಯು ಪ್ರಕಟಣೆಯನ್ನು ನೀಡಿದೆ.