ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ವಿರೋಧ ಪಕ್ಷದ ನಾಯಕರಾಗಿ ಪೂರ್ವ ಕ್ಷೇತ್ರದ 63ನೇ ವಾರ್ಡ ಕಾಂಗ್ರೆಸ್ ಪಕ್ಷದ ಸದಸ್ಯ ಮಹಮ್ಮದ್ ಆಲಿಯಾಸ್ ಮನಿಯಾರ ನೇಮಕಗೊಂಡಿದ್ದಾರೆ.

ಈ ನೇಮಕವನ್ನು ಎಲ್ಲಾ ಸದಸ್ಯರ ಹಾಗೂ ಶಾಸಕರು, ಮುಖಂಡರ ಅಭಿಪ್ರಾಯ ಪಡೆದು ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ ಪ್ರಕಟಿಸಿದ್ದಾರಲ್ಲದೇ ಜನಸಾಮಾನ್ಯರ ಗಟ್ಟಿ ಧ್ವನಿಯಾಗಿ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ.

ಹಾಲಿ ವಿಪಕ್ಷ ನಾಯಕ ಇಮ್ರಾನ್ ಯಲಿಗಾರ ಅವಧಿ ಇಂದು ಮುಕ್ತಾಯಗೊಂಡಿದೆ.25ನೇ ಅವಧಿಯ ಅಂತಿಮ ವಿಪಕ್ಷ ನಾಯಕ ಪಟ್ಟ ಮೇಯರ್ ಪ್ರತಿನಿಧಿಸುವ ಪೂರ್ವ ಕ್ಷೇತ್ರದ ಪಾಲಾಗಿರುವದು ವಿಶೇಷವಾಗಿದೆ.
ಬಿಲ್ಕಿಷ ಬಾನು ಮುಲ್ಲಾ, ಶಂಭು ಗೌಡ ಸಾಲಮನಿ,ಹಾಲಿ ವಿಪಕ್ಷ ನಾಯಕ ಯಲಿಗಾರ ಹೆಸರು ಅಂತಿಮವಾಗಿ ಕೇಳಿ ಬಂದಿದ್ದವು.
ಪ್ರಬಲ ಪ್ರತಿಪಕ್ಷವಾಗಿ ಎಲ್ಲಾ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವುದಾಗಿ ಮನಿಯಾರ ತಿಳಿಸಿದ್ದಾರೆ.
ಮನಿಯಾರ ಅವರು ಜನಾನುರಾಗಿ ಪಾಲಿಕೆ ಸದಸ್ಯರಾಗಿದ್ದು, ವಾರ್ಡ್ ನ ಎಲ್ಲಾ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಅಲ್ತಾಫ್ ಹಳ್ಳೂರ ಆದೇಶ ಪತ್ರ ನೀಡುವ ವೇಳೆ ಪಾಲಿಕೆ ಸದಸ್ಯರಾದ ಇಮ್ರಾನ್ ಯಲಿಗಾರ, ಬಶೀರ್ ಗೂಡಮಾಲ್, ಇಕ್ಬಾಲ್ ನವಲೂರ, ಸಾದಿಕ್ ಯಕ್ಕುಂಡಿ, ದೊರೆರಾಜ ಮಣಿಕುಂಟಲಾ , ಸುವರ್ಣ ಕಲಕುಂಟಲಾ,ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ ಮುಂತಾದವರು ಇದ್ದರು.




