*ಪ್ರಾಥಮಿಕ ತನಿಖೆಯಲ್ಲಿ ಆರೋಪ ಬೆಳಕಿಗೆ*
ಹಾವೇರಿ : ಹಾನಗಲ್ ಪಟ್ಟಣದ ಸಮುದಾಯವೊಂದರ ಪ್ರಭಾವಿ ವ್ಯಕ್ತಿಯೊಬ್ಬರ ಲೊಕೇಷನ್ ಮಾಹಿತಿ ಬೇರೆಯವರಿಗೆ ನೀಡಿದ ಆರೋಪದಡಿ ಸರ್ಕಲ್ ಇನ್ಸ್ಪೆಕ್ಟರ್ ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಲೊಕೇಷನ್ನಿಂದ ತೀವ್ರ ಸಮಸ್ಯೆಗೆ ಸಿಲುಕಿದ್ದ ಹಾನಗಲ್ ಪಟ್ಟಣದ ಪ್ರಭಾವಿ ನೀಡಿದ್ದ ಮಾಹಿತಿ ಅನ್ವಯ ಪ್ರಾಥಮಿಕ ತನಿಖೆ ನಡೆಸಿ ವರದಿ ಪಡೆದಿದ್ದ ದಾವಣಗೆರೆ ವಲಯದ ಐಜಿಪಿ ರವಿಕಾಂತೇಗೌಡ ಅವರು ಆಂಜನೇಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಐಜಿಪಿ ಆದೇಶ ಉಲ್ಲೇಖಿಸಿ ಇನ್ನೊಂದು ಆದೇಶ ಹೊರಡಿಸಿರುವ ಜಿಲ್ಲಾ ಎಸ್ಪಿ ಅಂಶುಕುಮಾರ, ಸಿಪಿಐ ಅವರನ್ನು ದಿ.15ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿದ್ದು ಅವರ ಸ್ಥಾನಕ್ಕೆ ಪ್ರಭಾರಿಯಾಗಿ ಶಿಗ್ಗಾವಿ ಸಿಪಿಐ ಅನಿಲ್ಕುಮಾರ ರಾಠೋಡ ನಿಯೋಜನೆಗೊಳಿಸಲಾಗಿದೆ.
ಅಪರಾಧ ಪ್ರಕರಣಗಳ ತನಿಖೆ ಸಂದರ್ಭದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಲೋಕೇಷನ್ ತಿಳಿದುಕೊಳ್ಳುವ ಅವಕಾಶ ಪೊಲೀಸರಿಗೆ ಮಾತ್ರ ಇದ್ದು, ಸಿಪಿಐ ಆಂಜನೇಯ ಇದನ್ನು ದುರುಪಯೋಗಪಡಿಸಿಕೊಂಡಿರುವುದು ಪ್ರಾಥಮಿಕ ವಿಚಾರಣೆಯಿಂದ ಬೆಳಕಿಗೆ ಬಂದಿದೆ.